ಆಕಾಶದಲ್ಲಿ ಒಂದು ಅಪರೂಪದ ಅತಿಥಿ ಬರುತ್ತಿದೆ. ಲಕ್ಷಾಂತರ ಕಿಮೀ ದೂರದಿಂದ ಬರುತ್ತಿರುವ ಈ ಹಿಮದ ಚೆಂಡು ಸೂರ್ಯನ ಸಮೀಪ ಹಾದುಹೋಗಿ ಮತ್ತೆ ಕಣ್ಮರೆಯಾಗಲಿದೆ. ಆದರೆ ಹೀಗೆ ಸೂರ್ಯನ ಸಮೀಪ ಹಾಯುವಾಗ ಉದ್ದದ ಬಾಲ ಬೆಳೆಸಿಕೊಂಡು ಒಂದು ಅದ್ಭುತ ಪ್ರದರ್ಶನ ನೀಡಲಿದೆ. ಇದೇ ಧೂಮಕೇತು ಐಸಾನ್. ಧೂಮಕೇತು ಐಸಾನ್ ನ ಪೂರ್ಣ ಹೆಸರು C/2012 S1 (ISON). ಇದನ್ನು ಕಂಡುಹಿಡಿದದ್ದು ವಿಜ್ಞಾನಿಗಳಾದ ನೆವ್ಸ್ಕಿಮತ್ತು ನೋವಿಚೋನೋಕ್. ಅವರು International Scientific Optical Network ನ ದೂರದರ್ಶಕವನ್ನು ಬಳಸಿ ಈ ಧೂಮಕೇತುವನ್ನು ಹುಡುಕಿದ್ದರಿಂದ ಐಸಾನ್ ಎಂಬ ಹೆಸರು ಬಂತು.
ಧೂಮಕೇತುಗಳು ಆಕಾಶದಲ್ಲಿ ವಿಶೇಷವೇನಲ್ಲ. ಇಂದು ರಾತ್ರಿ ಸಹ ದೂರದರ್ಶಕದ ಮೂಲಕ ೪ ಧೂಮಕೇತುಗಳನ್ನು ನೋಡಬಹುದು. ಆದರೆ ಐಸಾನ್ ನ ವಿಶೇಷತೆ ಏನೆಂದರೆ ನವೆಂಬರ್ ೨೮ರಂದು ಅದು ಸೂರ್ಯನಿಗೆ ಅತ್ಯಂತ ಸಮೀಪದಲ್ಲಿ (೧,೫೦೦,೦೦೦ ಮೈಲ್ಲಿ) ಹಾದ ನಂತರ ದೊಡ್ಡ ಬಾಲದೊಂದಿಗೆ ಆಕಾಶದಲ್ಲಿ ಹೊಳೆಯಲಿದೆ. ಬರಿ ಕಣ್ಣಿಗೆ ಕಾಣಲಿದೆ. ಡಿಸೆಂಬರ್ ನ ಮೊದಲ ವಾರದಲ್ಲಿ ಸೂರ್ಯೋದಯಕ್ಕೆ ಮುಂಚೆ ಪೂರ್ವ ದಿಕ್ಕಿನಲ್ಲಿ ಕಾಣಲಿದೆ.
ಸೆಪ್ಟೆಂಬರ್ ೧೨, ೨೦೧೨ ರಂದು ಇದನ್ನು ಕಂಡುಹಿಡಿದಾಗ ಇದರ ತೂಕ ಮತ್ತು ಕಕ್ಷೆಯನ್ನು ಗಮನಿಸಿ ಇದು ಪೂರ್ಣಚಂದ್ರನಿಗಿಂತ ಉಜ್ವಲವಾಗಿ ಹೊಳೆಯಬಹುದೆಂದು ವಿಜ್ಞಾನಿಗಳು ನಿರೀಕ್ಷಿಸಿದ್ದರು. ಆದರೆ ನಂತರದ ವೀಕ್ಷಣೆಗಳಿಂದ ಇದು ಅಷ್ಟೊಂದು ಪ್ರಖರವಾಗಲಾರದು ಎಂಬ ಅಂಶ ಬೆಳಕಿಗೆ ಬಂತು.
ಹವ್ಯಾಸಿ ಖಗೋಳ ವೀಕ್ಷಕರಾದ ನಾವು ಇದರ ಬರವಿಗಾಗಿ ಕಾತರದಿಂದ ಕಾಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಬ್ಲಾಗಿನಲ್ಲಿ ಹೆಚ್ಚಿನ ವಿಷಯಗಳನ್ನು ಬರೆಯುವುದು ನನ್ನ ಆಶಯ.

No comments:
Post a Comment